ವರದಿ ರಾಣಿ ಪ್ರಸನ್ನ


ಮೃತ್ಯುವಿಗೆ ಆಹ್ವಾನ ನೀಡುತಿರುವಾರ ಬಾಚಳ್ಳಿ ಗ್ರಾಮದ ಐ-ಮಾಸ್ಕ್ ದೀಪ. ದುರಸ್ತಿಗೆ ಮನಸ್ಸು ಮಾಡದ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಗಂಗಾಧರ್ ಎಂದು ಗ್ರಾಮಸ್ಥರ ದೂರು

ಸಕಲೇಶಪುರ ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಿಸಿದ್ದ  ಐ-ಮಾಸ್ಕ್ ದೀಪ  ಮುರಿದು  ತೂಗುತ್ತಿಯಂತೆ ನೇತಾಡುತ್ತಿದ್ದು ಸಾರ್ವಜನಿಕರು ಆತಂಕದೊಂದಿಗೆ ತಿರುಗಾಡುವಂತಹ ಪರಿಸ್ಥಿತಿ ಹೆತ್ತೂರು ಗ್ರಾಮಪಂಚಾಯಿತಿಯ  ಬಾಚಳ್ಳಿ ಗ್ರಾಮದಲ್ಲಿ ನಿರ್ಮಾಣವಾಗಿದೆ.

ಕಳೆದ ಸುಮಾರು 6 ವರ್ಷಗಳ ಹಿಂದೆ  ಗ್ರಾಮಸ್ಥರಿಗೆ ಹಾಗೂ ಪ್ರವಾಸಿಗರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಐ-ಮಾಸ್ಕ್ ದೀಪದ ವ್ಯವಸ್ಥೆ ಮಾಡಲಾಗಿತ್ತು. ಆದರೆ  ಒಂದು ವರ್ಷದ ಕೆಳಗೆ ಜೋರು ಮಳೆ ಗಾಳಿಗೆ ಈ ದೀಪ ಮುರಿದು ಕೇವಲ ಒಂದು ವಿದ್ಯುತ್ ತಂತಿ ಆಸರೆಯಲ್ಲಿ  ನಿಂತಿದೆ.ಈ ಸ್ಥಳದಲ್ಲಿ ಹೆಚ್ಚು ಕಾಡು ಆನೆ ಸಂಚರಿಸುವ ಸ್ಥಳವಾಗಿದ್ದು, ಅಲ್ಲದೆ ಪ್ರತಿನಿತ್ಯ ಅತಿ ಹೆಚ್ಚು ಪ್ರವಾಸಿಗರು   ತಿರುಗಾಡುವಂತಹ  ಪ್ರದೇಶವಾಗಿದೆ. ಇಲ್ಲಿ ಐ-ಮಾಸ್ಕ್ ದೀಪದ ವ್ಯವಸ್ಥೆ ಇಲ್ಲದೆ ಸಮಸ್ಯೆ ಎದುರಾಗಿತ್ತು. ಜೊತೆಗೆ ತೂಗುಗತ್ತಿಯಂತೆ ಇರುವ ಈ ಐ-ಮಾಸ್ಕ್ ದೀಪದ ವ್ಯವಸ್ಥೆ  ಯಾವಾಗ ಯಾರ ಮೇಲೆ ಬೀಳುತ್ತದೋ ಎಂಬ  ಆತಂಕದಿಂದ ತಿರುಗಡುವಂತಗಿದೆ. ಈ ಐ-ಮಾಸ್ಕ್ ದೀಪದ  ದುರಸ್ತಿಗಾಗಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷರಾದ ಗಗನ್ ಅವರ ಅಧ್ಯಕ್ಷತೆಯಲ್ಲಿ  ಹೆತ್ತೂರು ಪಂಚಾಯಿತಿ ಅಧ್ಯಕ್ಷರು ಹಾಗೂ ಪಿ.ಡಿ.ಒ ಅವರಿಗೆ  ಮನವಿ ಪತ್ರ ಸಲ್ಲಿಸಿದ್ದರು. ಆದರೂ ಕೂಡ ಇದುವರೆಗೂ ಯಾವುದೇ ಸಮಸ್ಯೆ ಬಗೆಹರಿಸುವ ಕೆಲಸ  ನಡೆದಿಲ್ಲ.

ಕಳೆದ  ವಾರದಿಂದ ಸತತವಾಗಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಣ ಅಧಿಕಾರಿ ಗಂಗಾಧರ್ ಅವರಿಗೆ  ಕರೆ ಮಾಡುತ್ತಿದ್ದರು ಕೂಡ ಯಾವುದೇ ರೀತಿಯ ಕರೆಗಳನ್ನು ಸ್ವೀಕರಿಸಿಲ್ಲ ಹಾಗೂ ಈ ಸಮಸ್ಯೆಯ ಬಗ್ಗೆ ಕ್ರಮಕೈಗೊಂಡಿಲ್ಲ. ಇಂತಹ ಸ್ಪಂದಿಸದ ಅಧಿಕಾರಿಗಳಿಂದ ಯಾವ ರೀತಿ ಅಭಿವೃದ್ಧಿಯನ್ನು  ಕಾಣುವುವುದು.?

ಒಂದು ವಾರದ ಒಳಗೆ ಮೃತ್ಯುವಿಗೆ ಆಹ್ವಾನ ನೀಡುತಿರುವಾರ ಬಾಚಳ್ಳಿ ಗ್ರಾಮದ ಐ-ಮಾಸ್ಕ್ ದೀಪ    ಸರಿಪಡಿಸದಿದ್ದರೆ ತಾಲ್ಲೂಕು ಪಂಚಾಯಿತಿ ಮುಂದೆ ಬೃಹತ್ ಮಟ್ಟದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಎಂದು ತಾಲ್ಲೂಕು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ಗಗನ್ ತಿಳಿಸಿದ್ದಾರೆ.

Leave comment

Your email address will not be published. Required fields are marked with *.