ಸಕಲೇಶಪುರ: ತಾಲೂಕಿನ ಚಂಗಡಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ದು ಇದರಲ್ಲಿ ಒಟ್ಟು 9 ಜನ ಸ್ಪರ್ಧಿಸಿದ್ದು ಬಿಜೆಪಿ ಗೆ 4 ಮತಗಳು ಲೋಕೇಶ್ ಗೌಡರವರಿಗೆ ಹಾಗೆಯೇ ಕಾಂಗ್ರೆಸ್ ಗೆ 5 ಮತಗಳು ಜಗದೀಶ್ ಅವರಿಗೆ ಲಭಿಸಿದ್ದು ಕೇವಲ 1 ಅಂಕಿಯಲ್ಲಿ ಕಾಂಗ್ರೆಸ್ ಪಕ್ಷ ಮುನ್ನಡೆ ಸಾಧಿಸಿದೆ.

ಈ ಸಂದರ್ಭದಲ್ಲಿ ಶಾಸಕರಾದ, ವಾಲೆ ಮಂಜು, ಕಾಂಗ್ರೆಸ್ ಮುಖಂಡರಾದ ಉದಯ್ ಹೆಚ್ ಹೆಚ್, ಯೂಥ್ ಕಾಂಗ್ರೆಸ್ ಭುವನಾಕ್ಷ,, ಯೂಥ್ ಕಾಂಗ್ರೆಸ್ ಧರ್ಮ ಹೆನ್ಲಿ, ಅವರುಗಳು ಅಭಿನಂದನೆ ಸಲ್ಲಿಸಿದರು, ಇನ್ನಿತರರಾದ ಮಾಜಿ ಅಧ್ಯಕ್ಷರು ಚಂದ್ರಶೇಖರ್, ಗಂಗಾಧರ್, ನಾಗೇಶ್, ವಸಂತ್, ಲೋಕೇಶ್, ಪ್ರೀತಂ, ದಿನೇಶ್, ಪವಿತ್ರ ರಸಿಕ , ಮಾಜಿ ಚೇರ್ ಮ್ಯಾನ್ ಆದ ಸುಬ್ಬಣ್ಣ, ಉಪಸ್ಥಿತರಿದ್ದರು.

ಚುನಾವಣಾ ನೋಡೆಲ್ ಅಧಿಕಾರಿಯಾಗಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗಂಗಾಧರ್, ಹಾಗು ತಾಲ್ಲೂಕು ಪಂಚಾಯಿತಿ ಹರೀಶ್ ಅವರು ಉಪಸ್ಥಿತರಿದ್ದರು.

Leave comment

Your email address will not be published. Required fields are marked with *.