ಸಕಲೇಶಪುರ ಮಹಿಳೆಯರಿಗೆ ವಿಶೇಷ ಸೂಚನೆ ನೀಡಿದ ಪೊಲೀಸ್ ತಂಡ

ಸಕಲೇಶಪುರಡ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಹಲವು ಸೂಚನೆಗಳನ್ನು ಅನುಸರಿಸುವಂತೆ ಸಕಲೇಶಪುರ ನಗರ ಪೊಲೀಸ್ ಠಾಣೆ ತಿಳಿಸಿದೆ
ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಉಚಿತ ಕೊಡುಗೆಗಳ ನೆಪದಲ್ಲಿ ಆನ್ಲೈನ್ ವಂಚನೆ ಮಾಡುವ ಸಂಭವವಿದ್ದು ಸಾರ್ವಜನಿಕರು ಯಾವುದೇ ಉಚಿತ ಕೊಡುಗೆ ಕರೆಗಳ ಮತ್ತು ಸಂದೇಶಗಳ ಬಗ್ಗೆ ಎಚ್ಚರ ವಹಿಸುವುದು.
ಪೂಜಾ ಸಮಯದಲ್ಲಿ ಹೆಚ್ಚು ಒಡವೆ ಹಣ ಮತ್ತು ಆಭರಣಗಳನ್ನು ಪ್ರದರ್ಶನಕ್ಕೆ ಇಡದೆ ಸರಳವಾಗಿ ಹಬ್ಬವನ್ನು ಆಚರಿಸುವುದು.
ಹಬ್ಬದ ದಿನ ಮನೆಯಲ್ಲಿ ಒಂಟಿಯಾಗಿರುವಾಗ ಮುಂಭಾಗಲು ಹಿಂಬಾಗಿಲು ಹಾಕಿಕೊಂಡು ಕೆಲಸ ಮಾಡುವುದು.
ನೆರೆಹೊರೆಯವರ ಮನೆಗೆ ತೆರಳುವಾಗ ಮನೆಗೆ ಮತ್ತು ಗೇಟಿಗೆ ಬೀಗ ಹಾಕುವುದನ್ನು ಮರೆಯಬೇಡಿ.
ಅಪರಿಚಿತರು ಪೂಜೆಗೆ ಮನೆಗೆ ಬಂದಾಗ ಆದಷ್ಟು ಜಾಗ್ರತೆ ವಹಿಸುವುದು.
ಕಿಟಕಿಯ ಪಕ್ಕ ಬೆಲೆ ಬಾಳುವ ವಸ್ತುಗಳನ್ನು ಇಡುವುದನ್ನು ತಪ್ಪಿಸಬೇಕು.
ಚಿನ್ನದ ಆಭರಣವನ್ನು ಧರಿಸಿಕೊಂಡು ಹೊರಹೋಗುವಾಗ ಅಕ್ಕ ಪಕ್ಕದಲ್ಲಿ ಯಾವುದಾದರೂ ವ್ಯಕ್ತಿ ನಿಮ್ಮನ್ನು ಗಮನಿಸುತ್ತಿದ್ದಾರೆ ಹಿಂಬಾಲಿಸುತ್ತಿದ್ದಾರೆಯೇ ಎಂದು ಗಮನಿಸುವುದು.
ಎಲ್ಲರೂ ಸುರಕ್ಷತೆಯಿಂದ ಯಾವುದೇ ದುರ್ಘಟನೆ ನಡೆಯದಂತೆ ಹಬ್ಬವನ್ನು ಆಚರಿಸುವುದು.
ಪ್ರಕಟಣೆ : ಸಕಲೇಶಪುರ ನಗರ ಪೊಲೀಸ್ ಠಾಣೆ
ವರದಿ ರಾಣಿ ಪ್ರಸನ್ನ
